ರಾಷ್ಟ್ರ ಮಟ್ಟದ ವಸ್ತು ಪ್ರದರ್ಶನ “ಖಾದಿ ಉತ್ಸವ-2020” ದಿನಾಂಕ:16-01-2020 ರಿಂದ 14-02-2020 ರ ವರೆಗೆ, ಸ್ಥಳ:- ಸ್ವಾತಂತ್ಯ್ರ ಉದ್ಯಾನವನ , “ಖಾದಿ ಉತ್ಸವ-2020”ರ ವಸ್ತು ಪ್ರದರ್ಶನದಲ್ಲಿ ಭಾಗವಹಿಸುವ ಮಳಿಗೆದಾರರ ಅರ್ಹತೆಗಳು ಹಾಗೂ ನಿಬಂಧನೆಗಳು
ಆನ್ಲೈನ್‍ ಅರ್ಜಿ
 • slidebg1
  ಖಾದಿ
  “ಸ್ವಯಂ ಘನತೆಯ ಸಂಕೇತ”
 • darkblurbg
  ಖಾದಿ
  “ಸ್ವಯಂ ಘನತೆಯ ಸಂಕೇತ”
 • darkblurbg
  ಖಾದಿ
  “ಸ್ವಯಂ ಘನತೆಯ ಸಂಕೇತ”

ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪ

ಮಾನ್ಯ ಮುಖ್ಯ ಮಂತ್ರಿಗಳು, ಕರ್ನಾಟಕ ಸರ್ಕಾರ

ಖಾದಿ ಮಂಡಳಿ ಕಾರ್ಯಕ್ರಮಗಳು

ಮಾರ್ಕೆಟಿಂಗ್

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ

ಖಾದಿ ಮತ್ತು ಗ್ರಾಮೋದ್ಯೋಗ ಘಟಕಗಳು ಉತ್ಪಾದಿಸುವ ಉತ್ಪನ್ನಗಳು ಪರಿಸರ ಸ್ನೇಹಿ, ನೈಜ. ಆರೋಗ್ಯಕರ, ಉತ್ಕ್ರಷ್ಟ ವಸ್ತುಗಳು, ಜೀವನಾತ್ಮಾವಶ್ಯಕ ಎಲ್ಲಾ ವಸ್ತುಗಳು ಈ ಕೇತ್ರದಲ್ಲಿ ಉತ್ಪಾದಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಉತ್ಪನ್ನಗಳು ನಗರ ಪ್ರದೇಶಗಳ ಜನತೆಯ ಅದರಲ್ಲು ವಿಶೇಷವಾಗಿ ಯುವ ಜನಾಂಗದ ಆಕರ್ಷಣೆಗೆ ಒಳಪಟ್ಟಿದೆ. ಗ್ರಾಹಕರ ಆಕಾಂಕ್ಷೆಗಳಿಗೆ ಸ್ಪಂದಿಸಿ ವಿವಿಧ ವಿನ್ಯಾಸಗಳ ಆಧುನಿಕ ಸಿದ್ದ ಉಡುಪುಗಳನ್ನು ತಯಾರಿಸಲು ಖಾದಿ ಸಂಘ ಸಂಸ್ಥೆಗಳಿಗೆ ತರಬೇತಿಯನ್ನೂ ಸಹ ನೀಡಲಾಗಿದೆ. ಅಲ್ಲದೆ ಮಾರುಕಟ್ಟೆ ಅಭಿವೃಧ್ದಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಮಾರುಕಟ್ಟೆ ಪೈಪೋಟಿ ವ್ಯವಸ್ಥೆಯಲ್ಲಿ ಗ್ರಾಹಕರ ಆಪೇಕ್ಷೆಗಳಿಗೆ ಅನುಸಾರವಾಗಿ ನೂತನ ವಿನ್ಯಾಸದ, ವಿನೂತನ ಮಾದರಿಯ ಹಾಗೂ ಆಕರ್ಷಕ ಪ್ಯಾಕಿಂಗ್ ಆಳವಡಿಸಿಕೊಳ್ಳಲು ಈ ಕ್ಷೇತ್ರದ ಉದ್ದಿಮೆದಾರರನ್ನು / ಸಂಘ ಸಂಸ್ಥೆಗಳನ್ನು ಉತ್ತೇಜಿಸಲಾಗುತ್ತಿದೆ ಹಾಗೂ ಈ ಉತ್ಪನ್ನಗಳ ಮಾರುಕಟ್ಟೆಗಾಗಿ ವ್ಯಾಪಕ ಪ್ರಚಾರ ನೀಡಲಾಗುತ್ತಿದೆ.

 • 15+

  ವರ್ಷಗಳ ಅನುಭವ

 • 200+

  ಯಶಸ್ವಿ ಕಥೆಗಳು

 • 240+

  ತೃಪ್ತ ಗ್ರಾಹಕರು

 • 130+

  ಸಲಹೆಗಾರರು

ಪ್ರಧಾನಿ ಉದ್ಯೋಗ ಕಾರ್ಯಕ್ರಮ

ಪ್ರಧಾನ ಮಂತ್ರಿಗಳ ರೋಜ್‍ಗಾರ್ ಯೋಜನೆಯನ್ನು ಅಂಚು ಹಣ ಯೋಜನೆಯಲ್ಲಿ ವಿಲೀನಗೊಳಿಸಿ ಭಾರತ ಸರ್ಕಾರದ ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಸಚಿವಾಲಯವು ಹೊಸದಾಗಿ ಪ್ರಧಾನ ಮಂತ್ರಿಯವರ ಉದ್ಯೋಗ ಸೃಜನ ಎಂಬ ಯೋಜನೆಯನ್ನು 2008-09 ನೇ ಸಾಲಿನಿಂದ ಜಾರಿಗೆ ತಂದಿರುತ್ತದೆ.

ಯೋಜನೆಯ ರೂಪರೇಷಗಳು
 • ಗ್ರಾಮಾಂತರ ಪ್ರದೇಶ
  ಸರ್ಕಾರದಿಂದ ರೆವಿನ್ಯೂ ಗ್ರಾಮವಾಗಿ ಪ್ರಕಟವಾಗಿರುವ ಅಥವಾ 20,000 ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪ್ರದೇಶ.
 • ಯೋಜನಾ ವೆಚ್ಚ
 • ಸೇವಾ ಉದ್ದಿಮೆಗಳಿಗೆ ಗರಿಷ್ಠ ಯೋಜನಾ ವೆಚ್ಚ ರೂ.10,00 ಲಕ್ಷ (ಹತ್ತು ಲಕ್ಷ) ಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
 • ಉತ್ಪಾದನಾ ಉದ್ದಿಮೆಗಳಿಗೆ ರೂ.25,00 ಲಕ್ಷ (ಇಪ್ಪತ್ತೈದು ಲಕ್ಷ)ಗಳವರೆಗೆ ಯೋಜನೆಗಳನ್ನು ರೂಪಿಸಬಹುದಾಗಿದೆ.

ಖಾದಿ ಭಂಡಾರಗಳು

ಖಾದಿ ಭಂಡಾರಗಳು ಪಟ್ಟಿ
ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ